Genesis - Chapter 5
Holy Bible

1 : ಆದಾಮನ ವಂಶದವರ ಚರಿತ್ರೆ: ಸೃಷ್ಟಿ ಕಾಲದಲ್ಲಿ ದೇವರು ಮಾನವನನ್ನು ತಮ್ಮ ಹೋಲಿಕೆಯಂತೆಯೇ ಸೃಷ್ಟಿಮಾಡಿದರು.
2 : ಅವರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ಮಾಡಿದರು. ಅಂದೇ ಅವರನ್ನು ಆಶೀರ್ವದಿಸಿ ಅವರಿಗೆ ‘ಮನುಷ್ಯ’ರೆಂದು ಹೆಸರಿಟ್ಟರು.
3 : ಆದಾಮನು 130 ವರ್ಷದವನಾದಾಗ ರೂಪದಲ್ಲಿ ತನ್ನಂತೆಯೇ ಇದ್ದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.
4 : ಸೇತನು ಹುಟ್ಟಿದ ಮೇಲೆ ಆದಾಮನು 800 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳು ಇದ್ದರು.
5 : ಸತ್ತಾಗ ಅವನಿಗೆ 930 ವರ್ಷಗಳಾಗಿದ್ದವು.
6 : ಸೇತನು 105 ವರ್ಷದವನಾದಾಗ ಎನೋಷನನ್ನು ಪಡೆದನು.
7 : ಎನೋಷನು ಹುಟ್ಟಿದ ಮೇಲೆ ಅವನು 807 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣು ಮಕ್ಕಳೂ ಇದ್ದರು.
8 : ಸತ್ತಾಗ ಅವನಿಗೆ 912 ವರ್ಷಗಳಾಗಿದ್ದವು.
9 : ಎನೋಷನು 90 ವರ್ಷದವನಾದಾಗ ಕೇನಾನನ್ನು ಪಡೆದನು.
10 : ಕೇನಾನನು ಹುಟ್ಟಿದ ಮೇಲೆ ಎನೋಷನು 815 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣು ಮಕ್ಕಳೂ ಇದ್ದರು.
11 : ಸತ್ತಾಗ ಅವನಿಗೆ ಒಟ್ಟು 905 ವರ್ಷಗಳಾಗಿದ್ದವು.
12 : ಕೇನಾನನು 70 ವರ್ಷದವನಾದಾಗ ಮಹಲಲೇಲನನ್ನು ಪಡೆದನು.
13 : ಮಹಲಲೇಲನು ಹುಟ್ಟಿದಮೇಲೆ ಕೇನಾನನು 840 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣು ಮಕ್ಕಳಿದ್ದರು.
14 : ಸತ್ತಾಗ ಅವನಿಗೆ ಒಟ್ಟು 910 ವರ್ಷಗಳಾಗಿದ್ದವು.
15 : ಮಹಲಲೇಲನು 65 ವರ್ಷದವನಾದಾಗ ಯೆರೆದನನ್ನು ಪಡೆದನು.
16 : ಯೆರೆದನು ಹುಟ್ಟಿದ ಮೇಲೆ ಮಹಲಲೇಲನು 830 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣು ಮಕ್ಕಳಿದ್ದರು.
17 : ಸತ್ತಾಗ ಅವನಿಗೆ ಒಟ್ಟು 895 ವರ್ಷಗಳಾಗಿದ್ದುವು.
18 : ಯೆರೆದನು 162 ವರ್ಷದವನಾದಾಗ ಹನೋಕನನ್ನು ಪಡೆದನು.
19 : ಹನೋಕನು ಹುಟ್ಟಿದ ಮೇಲೆ ಯೆರೆದನು 800 ವರ್ಷ ಬದುಕಿನು.
20 : ಸತ್ತಾಗ ಅವನಿಗೆ ಒಟ್ಟು 962 ವರ್ಷಗಳಾಗಿದ್ದವು.
21 : ಹನೋಕನು 65 ವರ್ಷದವನಾದಾಗ ಮೆತೂಷೆಲಹನನ್ನು ಪಡೆದನು.
22 : ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ದೇವರಲ್ಲಿ ಅನ್ಯೋನ್ಯತೆಯಿಂದ 300 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣು ಮಕ್ಕಳಿದ್ದರು.
23 : ಅವನು ಬದುಕಿದ ಕಾಲವೆಲ್ಲ 365 ವರ್ಷಗಳು.
24 : ಹನೋಕ ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇದ್ದಾಗ ದೇವರು ಅವನನ್ನು ಕರೆದುಕೊಂಡ ಕಾರಣ ಕಣ್ಮರೆಯಾದನು.
25 : ಮೆತೂಷೆಲಹನು 187 ವರ್ಷದವನಾದಾಗ ಲೆಮೆಕನನ್ನು ಪಡೆದನು.
26 : ಲೆಮೆಕನು ಹುಟ್ಟಿದ ಮೇಲೆ 782 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣು ಮಕ್ಕಳಿದ್ದರು.
27 : ಸತ್ತಾಗ ಅವನಿಗೆ ಒಟ್ಟು 969 ವರ್ಷಗಳಾಗಿದ್ದವು.
28 : ಲೆಮೆಕನು 182 ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು.
29 : ಪ್ರಭು ಶಪಿಸಿದ ಭೂಮಿಯಲ್ಲಿ ನಾವು ಕೈಕೆಸರಾಗಿಸಿಕೊಂಡು ಪಡುವ ಶ್ರಮೆಯಲ್ಲಿ ಈ ಮಗನು ಉಪಶಮನ ತರುವನು ಎಂದುಕೊಂಡು ಅವನಿಗೆ ನೋಹ ಎಂದು ಹೆಸರಿಟ್ಟನು.
30 : ನೋಹನು ಹುಟ್ಟಿದ ಮೇಲೆ ಲೆಮೆಕನು 595 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣು ಮಕ್ಕಳಿದ್ದರು.
31 : ಸತ್ತಾಗ ಅವನಿಗೆ ಒಟ್ಟು 777 ವರ್ಷಗಳಾಗಿದ್ದವು.
32 : ನೋಹನು 500 ವರ್ಷದವನಾದಾಗ ಶೆಮ್, ಹಾಮ್ ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು.

Holydivine